ಇಳುವರಿಯ ನಷ್ಟಗಳು - ಇದು ಪ್ರಾಕೃತಿಕ ಬೆಂಕಿ ಮತ್ತು ಸಿಡಿಲು ಬಡಿತ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರಚಂಡ ಬಿರುಗಾಳಿ, ತೂಫಾನು, ಚಂಡಮಾರುತ, ಹರಿಕೇನ್ ಮತ್ತು ಟಾರ್ನಡೋ ಇತ್ಯಾದಿ; ಪ್ರವಾಹ, ಜಮೀನು ಮುಳುಗಡೆ ಮತ್ತು ಭೂಕುಸಿತ; ಬರಗಾಲ, ಒಣ ಹವೆ, ಕ್ರಿಮಿಕೀಟಗಳ ಪೀಡೆಗಳು ಮತ್ತು ರೋಗಗಳು ಇತ್ಯಾದಿಯನ್ನು ಒಳಗೊಳ್ಳುತ್ತದೆ.
ಬಿತ್ತನೆಗೆ ತಡೆ ಒಂದು ಅಧಿಸೂಚಿತ ಪ್ರದೇಶದ ವಿಮೆ ಮಾಡಿಸಿರುವ ಹೆಚ್ಚಿನಷ್ಟು ರೈತರು ಬಿತ್ತನೆ / ನಾಟಿ ಮಾಡುವ ಉದ್ದೇಶ ಹೊಂದಿದ್ದು ಮತ್ತು ಅದಕ್ಕಾಗಿ ಹಣ ಖರ್ಚು ಮಾಡಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮೆ ಮಾಡಿಸಿರುವ ಬೆಳೆಯ ಬಿತ್ತನೆ / ನಾಟಿ ಮಾಡಲಾಗದಿದ್ದರೆ, ಅವರು ತಮಗಾದ ನಷ್ಟದ ಗರಿಷ್ಠ 25% ವರೆಗೆ ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ.
ಕೊಯ್ಲಿನ ನಂತರದ ನಷ್ಟಗಳು ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಡಿದ ಎರಡು ವಾರದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಲೆ ನಾಶವಾದಲ್ಲಿ ವಿಮೆ ರಕ್ಷಣೆ ದೊರೆಯುತ್ತದೆ
ಸ್ಥಳೀಯವಾದ ಅನಾಹುತಗಳು ಆಲಿಕಲ್ಲು ಮಳೆ, ಭೂಕುಸಿತ, ಬೆಲೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು ಮಿಂಚುಗಳಿಂದ ಉಂಟಾಗುವ ನಷ್ಟಕ್ಕೆ ವಿಮೆ ರಕ್ಷಣೆ ದೊರೆಯುತ್ತದೆ