ಇಳುವರಿಯ ನಷ್ಟಗಳು - ಇದು ಪ್ರಾಕೃತಿಕ ಬೆಂಕಿ ಮತ್ತು ಸಿಡಿಲು ಬಡಿತ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರಚಂಡ ಬಿರುಗಾಳಿ, ತೂಫಾನು, ಚಂಡಮಾರುತ, ಹರಿಕೇನ್ ಮತ್ತು ಟಾರ್ನಡೋ ಇತ್ಯಾದಿ; ಪ್ರವಾಹ, ಜಮೀನು ಮುಳುಗಡೆ ಮತ್ತು ಭೂಕುಸಿತ; ಬರಗಾಲ, ಒಣ ಹವೆ, ಕ್ರಿಮಿಕೀಟಗಳ ಪೀಡೆಗಳು ಮತ್ತು ರೋಗಗಳು ಇತ್ಯಾದಿಯನ್ನು ಒಳಗೊಳ್ಳುತ್ತದೆ.
ಬಿತ್ತನೆಗೆ ತಡೆಯಾಗುವುದು ಒಂದು ಅಧಿಸೂಚಿತ ಪ್ರದೇಶದ ವಿಮೆ ಮಾಡಿಸಿರುವ ಹೆಚ್ಚಿನಷ್ಟು ರೈತರು ಬಿತ್ತನೆ / ನಾಟಿ ಮಾಡುವ ಉದ್ದೇಶ ಹೊಂದಿದ್ದು ಮತ್ತು ಅದಕ್ಕಾಗಿ ಹಣ ಖರ್ಚು ಮಾಡಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮೆ ಮಾಡಿಸಿರುವ ಬೆಳೆಯ ಬಿತ್ತನೆ / ನಾಟಿ ಮಾಡಲಾಗದಿದ್ದರೆ, ಅವರು ತಮಗಾದ ನಷ್ಟದ ಗರಿಷ್ಠ 25% ವರೆಗೆ ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ.
ಕೊಯ್ಲಿನ ನಂತರದ ನಷ್ಟಗಳು ಕೊಯ್ಲಿನ ನಂತರ ಗದ್ದೆಯಲ್ಲೇ ಹರಡಿ ಒಣಗಿಸಬೇಕಾದ ಬೆಳೆಗಳಿಗೆ, ದೇಶಾದ್ಯಂತ ಬಿರುಗಾಳಿ / ಬಿರುಗಾಳಿಯೊಂದಿಗೆ ಮಳೆ ಮತ್ತು ಅಕಾಲಿಕ ಮಳೆಯಂತಹ ನಿರ್ದಿಷ್ಟ ಅಪಾಯಗಳ ವಿರುದ್ಧ, ಕೊಯ್ಲಿನ ನಂತರ ಗರಿಷ್ಠ 14 ದಿನಗಳ ಮಟ್ಟಿಗೆ ಮಾತ್ರ ವಿಮಾ ರಕ್ಷಣೆ ದೊರೆಯುತ್ತದೆ.
ಸ್ಥಳೀಯವಾದ ಅನಾಹುತಗಳುಅಧಿಸೂಚಿತ ಪ್ರದೇಶದಲ್ಲಿ ಉಳಿದವುಗಳಿಂದ ಪ್ರತ್ಯೇಕವಾಗಿರುವ ಒಂಟಿ ಗದ್ದೆಗಳಲ್ಲಿ ಆಲಿಕಲ್ಲು ಮಳೆ, ಭೂಕುಸಿತ ಮತ್ತು ನೆರೆ ಹಾವಳಿ ಉಂಟಾಗಿದೆ ಎಂದು ಗುರುತಿಸಲ್ಪಟ್ಟ ಸ್ಥಳೀಯವಾದ ಅಪಾಯಗಳಿಂದ ಸಂಭವಿಸಿದ ನಷ್ಟ / ಹಾನಿಗಳಿಗೆ ವಿಮಾ ರಕ್ಷಣೆ ದೊರೆಯುತ್ತದೆ.